World

“ಇವರಲ್ಲದೆ ಧರ್ಮಚಿಂತನೆ ಇನ್ಯಾರು ಮಾಡಬೇಕು?”

ಕತ್ತಲು ತುಂಬಿದ ರಸ್ತೆಯಲ್ಲಿ ಒಂದು ನಾಯಿ ಮಲಗಿದೆ ಅಂದುಕೊಳ್ಳೋಣ. ಒಬ್ಬ ದೂರದಲ್ಲಿ ಅದರ ಕಡೆ ನಡೆದುಕೊಂಡು ಹೋಗುತ್ತಿರುವಾಗ, ಆತನ ಕೈಯಲ್ಲಿದ್ದ ಏನೋ ಒಂದು ಸಣ್ಣ ವಸ್ತು ಕೆಳಗೆ ಬಿದ್ದುಹೋಗುತ್ತೆ. ಆತ ಅದನ್ನು ಎತ್ತಿಕೊಳ್ಳಲು ಕೆಳಗೆ ಬಗ್ಗುತ್ತಾನೆ ಅಷ್ಟೇ.. ದೂರದಲ್ಲಿ ಮಲಗಿದ್ದ ನಾಯಿ ತಕ್ಷಣ ಎಚ್ಚೆತ್ತು ಕೊಳ್ಳುತ್ತದೆ, ಗುರ್ರ್ ಎನ್ನುತ್ತದೆ. ಬಗ್ಗಿದವನಿಗೆ ನಾಯಿಯ ಬಗ್ಗೆ ಗೊತ್ತೇ ಇಲ್ಲ, ಒಡೆಯುವ ಉದ್ದೇಶವೂ ಇಲ್ಲ. ಆದರೂ ಅಷ್ಟುಮಟ್ಟಿಗೆ ಅದು ತನ್ನ ರಕ್ಷಣೆ ಬಗ್ಗೆ ಸದಾ ಜಾಗರೂಕ ಆಗಿರುತ್ತೆ. (ಇದು ವಾಲ್ಮೀಕಿ ರಾಮಾಯಣದಲ್ಲಿ ಶೂರ್ಪಣಿಕೆ, ರಾವಣನನ್ನು ಎಚ್ಚರಿಸಲು ಹೇಳುವ ಉದಾಹರಣೆ.)

ಮೊನ್ನೆ ವಾರಿಸ್ ಪಠಾಣ್ ಕರ್ನಾಟಕದಲ್ಲಿ ಹೇಳಿದ್ದು 15 ಕೋಟಿ ಮುಸ್ಲೀಮ್ ಮತ್ತು 100 ಕೋಟಿ ಹಿಂದೂಗಳಿಗೆ ಸಂಬಂಧ ಪಟ್ಟ, ಹಿಂದೂ ಧರ್ಮಕ್ಕೆ ಹಾಕಿದ ಅಪ್ಪಟ ಬೆದರಿಕೆ. ಇಂತಹ ಹೇಳಿಕೆಗಳು ಆಗಾಗ ಪ್ರಾಯೋಗಿಕವಾಗಿ ಅಲ್ಲೊಬ್ಬ ಇಲ್ಲೊಬ್ಬ ಹೇಳುತ್ತಲೇ ಇರುತ್ತಾರೆ.

ಇದಕ್ಕೆ ಮೊದಲು ಪ್ರತಿಕ್ರಿಯೆ ಕೊಡಬೇಕಾಗಿದ್ದವರು, ನಮ್ಮ ರಾಜ್ಯದ ದೊಡ್ಡ ದೊಡ್ಡ ಹಿಂದೂ ದೇವಸ್ಥಾನ ಮತ್ತು ಮಠಗಳನ್ನು ನೋಡಿಕೊಳ್ಳುತ್ತಿರುವ ಮಠಾಧೀಶರು, ಸ್ವಾಮಿಗಳು.. ನಾನು ಹೇಳುತ್ತಿರುವುದು ಶೃಂಗೇರಿ, ಧರ್ಮಸ್ಥಳ, ಉಡುಪಿ, ಮಲೈ ಮಹದೇಶ್ವರ, ಸಿದ್ಧಗಂಗಾ, ಸುತ್ತೂರು, ಕುಕ್ಕೆ, ಹೊರನಾಡು, ರಾಮಚಂದ್ರಾಪುರ… ಇನ್ನೂ ಎಲ್ಲಾ ಹಿಂದೂ ದೇವಸ್ಥಾನಗಳು ಮತ್ತು ಮಠಗಳ ಬಗ್ಗೆ.

ವಾರಿಸ್ ಪಠಾಣ್ ಹೇಳಿಕೆ ಪೊಳ್ಳೇ ಆಗಿರಬಹುದು, ಆದರೆ ಆ ನಾಯಿಗಿರುವಷ್ಟು ಕಾಳಜಿ, ನಿಮ್ಮ ಧರ್ಮದ ಮೇಲೆ ನಿಮಗೆ ಎಳ್ಳಷ್ಟೂ ಬೇಡವೇ?

ಅವನು ಹೇಳಿದ್ದು ಒಂದು ವೇಳೆ ನಡಿದಿದ್ದೇ ಆದರೆ, ಮೊದಲು ಶುರು ಮಾಡುವುದೇ ನಿಮ್ಮ ಮಠ ದೇವಸ್ಥಾನದಿಂದಲೇ ಅಲ್ಲವೇ? ಆತನ ಹೇಳಿಕೆಗೆ ಪುಷ್ಟಿ ಕೊಡಲು ಸಾವಿರಾರು ವರ್ಷಗಳ ಇತಿಹಾಸ ಇಲ್ಲವೇ? ಸುತ್ತಮುತ್ತಲ ದೇಶಗಳಲ್ಲಿ ಆಗುತ್ತಿರುವುದು ಕಣ್ಣಿಗೆ ಕಾಣುತ್ತಿಲ್ಲವೇ?

ಕಾಶಿ ವಿಶ್ವನಾಥ ಪಟ್ಟ ಪಾಡು, ನೀವು ಮಠದಲ್ಲಿ ಪೂಜೆ ಮಾಡುವ ಶಿವನದಲ್ಲವೆ? ಧರ್ಮಸ್ಥಳದ ಮಂಜುನಾಥ ಬೇರೆಯೇ? ಅಯೋಧ್ಯ ರಾಮನ ಕಷ್ಟ ನೀವು ಪೂಜಿಸೋ ಮೂಲ ರಾಮನದಲ್ಲವೆ? ಮಥುರಾ ಕೃಷ್ಣ ಪಟ್ಟ ಕಷ್ಟ, ಉಡುಪಿ ಕೃಷ್ಣನಿಗೆ ಸೇರಿಲ್ಲವೆ? ಕಾಶ್ಮೀರದ ಶೃಂಗೇರಿ ಪೀಠದ ಶಾರದೆ, ಶೃಂಗೇರಿ ಪೀಠದ ಶಾರದೆ ಬೇರೆ ಬೇರೆಯೇ?

ಧರ್ಮದ ಒಳಗಿನಿಂದ ಮತ್ತು ಹೊರಗಿನಿಂದ ಯಾರೇ ಏನೇ ಧರ್ಮ/ಸಮಾಜ/ರಾಷ್ಟ್ರದ ವಿರುದ್ಧ ಅಸಂಬದ್ಧ ಹೇಳಿಕೆ ಕೊಟ್ಟರೂ ದಯವಿಟ್ಟು ಅದನ್ನ ಖಂಡಿಸಿ.

ನಿಮಗೆ ಇದು ರಾಜಕೀಯ ವಿಷಯ, ಸರ್ಕಾರ ಬಗೆಹರಿಸಬೇಕಾದ ವಿಷಯ ಅನ್ನಿಸಿದರೆ, ಧರ್ಮದ ಮೇಲಿನ ಅವಲಂಬನೆ, ಪ್ರವಚನಗಳನ್ನು ಬಿಟ್ಟು, ಭಕ್ತರಿಂದ ದೂರ ಉಳಿಯಿರಿ. ನೀವೂ ದಯವಿಟ್ಟು ರಾಜಕೀಯ ಸೇರಿಬಿಡಿ.

ನಿಮ್ಮ ಈ ಜಾಣ ಮೌನಕ್ಕೆ ಧಿಕ್ಕಾರವಿರಲಿ. ನಿಮ್ಮ ಆರಾಧ್ಯ ದೈವವು ನಿಮಗೆ ಧೈರ್ಯವನ್ನು ಕೊಡಲಿ. ವಿದ್ಯಾರಣ್ಯರಂತಹ ಗುರುಗಳು ನಮ್ಮ ನಾಡಿಗೆ ಬರಲಿ.

Related Articles

Back to top button
Close
Close